ಡಾ.ಸೌಮ್ಯಾ ರಾಣಿ ಮೆರುಗು
ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ
ಶಾಖೆ | ಆವರಣದಲ್ಲಿ | ಆನ್ಲೈನ್ |
|---|---|---|
* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಡಾ. ಸೌಮ್ಯಾ ರಾಣಿ ಮೆರುಗು ಅವರು ಅತ್ಯುತ್ತಮ ಫಲವತ್ತತೆ ನಿರ್ವಹಣೆ, ಹೆಚ್ಚಿನ ಅಪಾಯವಿರುವ ಪ್ರಸೂತಿ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಅಪಾರ ಪರಿಣಿತಿ ಹೊಂದಿರುವ ಫಲವತ್ತತೆ ತಜ್ಞೆಯಾಗಿದ್ದಾರೆ. ಅವರಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ವೃತ್ತಿಜೀವನದ ಅನುಭವವಿದ್ದು, ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ನಿಖರತೆ ಹೊಂದಿದ್ದಾರೆ. ದಂಪತಿಗಳೊಂದಿಗಿನ ಪ್ರೀತಿ ಮತ್ತು ಆರೈಕೆಯಲ್ಲಂತೂ ಡಾ. ಸೌಮ್ಯಾ ಅವರು ಎತ್ತಿದ ಕೈ. ಡಾ. ಸೌಮ್ಯಾ ಅವರು ಸಂತಾನೋತ್ಪತ್ತಿ ಔಷಧ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಎರಡರಲ್ಲೂ ಫೆಲೋಶಿಪ್-ತರಬೇತಿ ಪಡೆದಿದ್ದಾರೆ. ದಂಪತಿಗಳು ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆ ಪಡೆದುಕೊಂಡು ತಮ್ಮ ತಾಯ್ತನದ ಕನಸನ್ನು ನನಸು ಮಾಡಿಕೊಳ್ಳಬೇಕು ಅನ್ನೋದು ಡಾ. ಸೌಮ್ಯಾ ಅವರ ಉದ್ದೇಶ ಮತ್ತು ಕಾಳಜಿ.
ಶಿಕ್ಷಣ ಮತ್ತು ಅರ್ಹತೆಗಳು
ವೈದ್ಯಕೀಯ ಪದವಿ (MBBS): ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಮತ್ತು HSK ಆಸ್ಪತ್ರೆ, ಬಾಗಲಕೋಟೆ (RGUHS), 2008–2012.
ಸ್ನಾತಕೋತ್ತರ ಪದವಿ (MS OBG): ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು (RGUHS), 2016–2019.
ಸ್ಪೆಷಲೈಸೇಷನ್ (FRM): ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್, ಗರ್ಭಗುಡಿ IVF ಕೇಂದ್ರ, ಬೆಂಗಳೂರು.
ಸೀನಿಯರ್ ರೆಸಿಡೆನ್ಸಿ: ಕಾಕತೀಯ ಮೆಡಿಕಲ್ ಕಾಲೇಜು / CKM ಸರ್ಕಾರಿ ಹೆರಿಗೆ ಆಸ್ಪತ್ರೆ, ವಾರಂಗಲ್ (2019–2020).
ಮಿನಿಮಲ್ ಆಕ್ಸೆಸ್ ಸರ್ಜರಿಯಲ್ಲಿ ಡಿಪ್ಲೊಮಾ ಮತ್ತು ಫೆಲೋಶಿಪ್ (FMAS & DMAS): ವರ್ಲ್ಡ್ ಲ್ಯಾಪರೊಸ್ಕೋಪಿ ಆಸ್ಪತ್ರೆ, ಗುರಗಾಂವ್ (2021).
ಗೈನಿಕ್ ಎಂಡೋಸ್ಕೋಪಿಯಲ್ಲಿ ಸರ್ಟಿಫಿಕೇಷನ್: BEST ಇನ್ಸ್ಟಿಟ್ಯೂಟ್, AV ಆಸ್ಪತ್ರೆ, ಬೆಂಗಳೂರು (2021–2022).
ಅನುಭವ ಮತ್ತು ಪರಿಣಿತಿ
ಅಡ್ವಾನ್ಸಡ್ ಇನ್‌ಫರ್ಟಿಲಿಟಿ ಮತ್ತು IVF ನಿರ್ವಹಣೆ.
ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟೆರೊಸ್ಕೋಪಿಕ್ ಕಾರ್ಯವಿಧಾನಗಳು.
ಹೆಚ್ಚಿನ ಅಪಾಯದ ಪ್ರಗ್ನೆನ್ಸಿಗಳ ನಿರ್ವಹಣೆ.
ಮಿನಿಮಲ್ ಆಕ್ಸೆಸ್ ಸರ್ಜರಿ (FMAS & DMAS)
ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡೋಸ್ಕೋಪಿ
ಸ್ತ್ರೀರೋಗಶಾಸ್ತ್ರದ ಶಸ್ತ್ರಚಿಕಿತ್ಸೆ
IVF ಚಿಕಿತ್ಸೆಯ ವಿಧಾನ
ಡಾ. ಸೌಮ್ಯ ರಾಣಿ ಅವರು ಪ್ರತಿ ದಂಪತಿಯ ಜೈವಿಕ ಮತ್ತು ಭಾವನಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರೆ. ಅವರ ವಿಧಾನವು ಇವುಗಳನ್ನು ಒಳಗೊಂಡಿದೆ.
ನಿಖರ ರೋಗ ಪರೀಕ್ಷೆ: ಸುಧಾರಿತ ಅಡ್ವಾನ್ಸಡ್ ಇಮೇಜಿಂಗ್ ಮತ್ತು ಹಾರ್ಮೋನ್ ಪ್ರೊಫೈಲಿಂಗ್ ಅನ್ನು ಬಳಸುವುದು.
ಶಸ್ತ್ರಚಿಕಿತ್ಸಾ ಅನುಭವ: ವರ್ಗಾವಣೆಗೆ ಮೊದಲು ಗರ್ಭಾಶಯ ಅಥವಾ ಟ್ಯೂಬಲ್ ಸಮಸ್ಯೆಗಳನ್ನು ಸರಿಪಡಿಸಲು ಚಿಕ್ಕದಾದ ಶಸ್ತ್ರಚಿಕಿತ್ಸೆ ಮಾಡುವುದು.
ನಾವೀನ್ಯತೆ: ಇಂಪ್ಲಾಂಟೇಶನ್ ಯಶಸ್ಸಿನ ದರಗಳನ್ನು ಸುಧಾರಿಸಲು "ಎಂಬ್ರಿಯೊ ಗ್ಲೂ" ನಂತಹ ಇತ್ತೀಚಿನ ತಂತ್ರ ಅಳವಡಿಸುವುದು.
ಪ್ರಶಸ್ತಿಗಳು ಮತ್ತು ಸಂಶೋಧನೆ
ಗಮನಾರ್ಹ ಪ್ರಶಸ್ತಿಗಳು: ಪ್ರಥಮ ಬಹುಮಾನ — ಟಿಪ್ಸ್ ಅಂಡ್ ಟ್ರಿಕ್ಸ್ ಇನ್ ಇನ್‌ಫರ್ಟಿಲಿಟಿ, ಮಂಗಳೂರು (2019).
ಪ್ರಮುಖ ಸಂಶೋಧನೆ: ಎಂಡೊಮೆಟ್ರಿಯಲ್ ಸಿದ್ಧತೆಗಾಗಿ ಸಾಂಪ್ರದಾಯಿಕ HRT vs. ಮಾಡಿಫೈಯ್ಡ್ ನ್ಯಾಚ್ಯುರಲ್ ಸೈಕಲ್ (FRM ಪ್ರಬಂಧ).
ಇಂಪ್ಲಾಂಟೇಶನ್ ದರದ ಮೇಲೆ ಭ್ರೂಣದ ಅಂಟಿನ ಪರಿಣಾಮ (ISAR, 2026).
ಪ್ರಿ-ಎಕ್ಲಾಂಪ್ಟಿಕ್ ರೋಗಿಗಳಲ್ಲಿ ವಿಟಮಿನ್ ಡಿ ಮಟ್ಟ
ಚಿಕಿತ್ಸೆಯ ಪ್ರಮುಖ ಲಕ್ಷಣಗಳು
ಸಮಗ್ರ ಫಲವತ್ತತೆ ಚಿಕಿತ್ಸೆ: ಪ್ರಾಥಮಿಕ ಸಮಾಲೋಚನೆಯಿಂದ ಹಿಡಿದು ಮುಂದುವರಿದ ಶಸ್ತ್ರಚಿಕಿತ್ಸೆ ತನಕ ಮತ್ತು IVF ವರೆಗೆ.
ವೃತ್ತಿಪರ ಅಂಗಸಂಸ್ಥೆಗಳು: ಭಾರತೀಯ ವೈದ್ಯಕೀಯ ಸಂಘದ (IMA) ಸದಸ್ಯರು ಮತ್ತು ತೆಲಂಗಾಣ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಲಾಗಿದೆ. (ನೋಂದಣಿ ಸಂಖ್ಯೆ: TSMC/FMR/09045) (KMC 103207)