

ಈ 2 ಸಂತಸದ ಗೆರೆಗಳಿಗಾಗಿ
ನೀವು ಎಷ್ಟು ಸಮಯದಿಂದ ಕಾಯುತ್ತಿದ್ದೀರಿ?
ಪ್ರತಿ ತಿಂಗಳು ಅದೇ ಭರವಸೆ. ಅದೇ ನಿರೀಕ್ಷೆ. ಆದರೆ ಅದೇ ಒಂದು ಗೆರೆ.
ಈ ಭಾವನೆ ನಿಮ್ಮಲ್ಲಿದ್ದರೆ, ಖಂಡಿತ ನೀವು ಏಕಾಂಗಿ ಅಲ್ಲ, ನೀವೊಬ್ಬರೇ ಉತ್ತರ ಹುಡುಕಬೇಕಾಗೂ ಇಲ್ಲ.
ಗರ್ಭಗುಡಿ, ಮೊದಲು ನಿಮ್ಮ ಮಾತುಗಳಿಗೆ ಕಿವಿಯಾಗುತ್ತದೆ. ನಿಮ್ಮ ಸಮಸ್ಯೆ ಅರಿತುಕೊಂಡು ಸೂಕ್ತವಾದ ಫಲವತ್ತತೆ ಚಿಕಿತ್ಸೆಯ ಆಯ್ಕೆಗಳನ್ನು ತಿಳಿಸುತ್ತದೆ.
ನಿಮ್ಮ ಪಯಣ ವೈಯಕ್ತಿಕವಾದುದು. ನಿಮ್ಮ ಮುಂದಿನ ಹೆಜ್ಜೆಯೂ ಹಾಗೇ ಇರಲಿ.
ಕಾಯುವಿಕೆ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
- ಯಾಕೆ ಇಷ್ಟು ತಡವಾಗುತ್ತಿದೆ?
- ಇನ್ನೂ ಒಂದು ತಿಂಗಳು ಕಾಯಬೇಕಾ?
- ಚಿಕಿತ್ಸೆಯ ಅಗತ್ಯವಿದೆಯಾ?
ನಾವು ಮೊದಲಿಗೆ ನಿಮ್ಮ ಮಾತುಗಳನ್ನ ಆಲಿಸುತ್ತೇವೆ. ಅವಶ್ಯಕತೆ ಇದ್ದಲ್ಲಿ ಇಬ್ಬರನ್ನೂ ಪರೀಕ್ಷಿಸಿ, ಲಭ್ಯವಿರುವ ಚಿಕಿತ್ಸೆಯ ಆಯ್ಕೆಗಳನ್ನು ನಿಮ್ಮ ಮುಂದಿಡುತ್ತೇವೆ. ನೆನಪಿರಲಿ, IVF ಚಿಕಿತ್ಸೆಯೊಂದೇ ಪರಿಹಾರವಾಗಿರಲ್ಲ.
ಮೊದಲು ಅರ್ಥ ಮಾಡ್ಕೊಳಿ. ನಂತರ ನಿರ್ಧರಿಸಿ.

ದಂಪತಿ ಸಮಾಲೋಚನೆ
ನಿಮ್ಮ ತಾಯ್ತನದ ಪಯಣವನ್ನು ಅರ್ಥ ಮಾಡಿಕೊಳ್ಳಿ.

ತಪಾಸಣೆಗಳು
ಸಂಪೂರ್ಣ ವೈಜ್ಞಾನಿಕ ವಿಶ್ಲೇಷಣೆ ಮತ್ತು ಪರೀಕ್ಷೆಗಳು

ತಜ್ಞರ ಅಭಿಪ್ರಾಯ
ನಿಮ್ಮ ಪರೀಕ್ಷಾ ವರದಿಗಳ ಬಗ್ಗೆ ಸ್ಪಷ್ಟ ವಿವರಣೆ

ಸೂಕ್ತವಾದ ದಾರಿ
ಮುಂದಿನ ಹೆಜ್ಜೆ ನೀವೇ ನಿರ್ಧರಿಸಿ
ನೀವು ತಾಯ್ತನದ ಪಯಣದ ಯಾವ ಹಂತದಲ್ಲಿದ್ದೀರಿ, ಯಾವ ವೈದ್ಯಕೀಯ ಮಾರ್ಗದರ್ಶನದ ಅಗತ್ಯವಿದೆ ಮತ್ತು ಯಾವುದು ಸೂಕ್ತ ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ಭೇಟಿ ಸಾಕು.
IVF ಚಿಕಿತ್ಸೆ ಅಗತ್ಯವಿದ್ದವರಿಗೆ, ಗರ್ಭಗುಡಿಯ ʼಪರಿಪೂರ್ಣ 2026 ʼ ಕಾರ್ಯಕ್ರಮವು ಚಿಕಿತ್ಸೆ ಮತ್ತು ಅದರ ವೆಚ್ಚದ ಬಗ್ಗೆ ಸಂಪೂರ್ಣ ಸ್ಪಷ್ಟತೆ ನೀಡುತ್ತದೆ. ಚಿಕಿತ್ಸೆಯ ವಿವರ ಮತ್ತು ವೆಚ್ಚವನ್ನು ಮೊದಲೇ ತಿಳಿದುಕೊಂಡು ದಂಪತಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ನಿರ್ಧಾರ ತೆಗೆದುಕೊಳ್ಳಬಹುದು.
ಪೋಷಕರಾಗುವ ಸುಂದರ ಕನಸನ್ನು ನನಸಾಗಿಸಿಕೊಳ್ಳಲು ಬಯಸುವ, ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯಲಾಗದೆ ಚಿಂತಿಸುತ್ತಿರುವ ದಂಪತಿಗಳಿಗೆ ನೆರವಾಗುವುದು ನಮ್ಮ ಉದ್ದೇಶ. ಹಾಗಾಗಿಯೇ ಗರ್ಭಗುಡಿ IVF ಸೆಂಟರ್, ಗರ್ಭಜ್ಞಾನ್ ಫೌಂಡೇಶನ್ ಸಹಯೋಗದಲ್ಲಿ ಪರಿಪೂರ್ಣ 2026 ಕಾರ್ಯಕ್ರಮವನ್ನು ಆರಂಭಿಸಿದೆ.
ಪರಿಪೂರ್ಣದಲ್ಲಿ ಏನೆಲ್ಲ ಸೇರಿವೆ?
ಕನ್ಸಲ್ಟೇಷನ್‌ನಿಂದ ಹಿಡಿದು ಗರ್ಭಧಾರಣೆ ಕನ್‌ಫರ್ಮ್ ಆಗುವವರೆಗಿನ ಎಲ್ಲ ಹಂತಗಳೂ ಪರಿಪೂರ್ಣ 2026ರಲ್ಲಿ ಸೇರಿವೆ. ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಏನೆಲ್ಲ ಸೌಲಭ್ಯಗಳು ದೊರೆಯುತ್ತವೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ.
- 01
ಸಂತಾನೋತ್ಪತ್ತಿ ತಜ್ಞರು
ಚಿಕಿತ್ಸೆಯ ಸಮಯದಲ್ಲಿ ಕನ್ಸಲ್ಟೇಷನ್ ಮತ್ತು ಸ್ಕ್ಯಾನ್‌ಗಳು
- 02
ಡಯಾಗ್ನೊಸ್ಟಿಕ್ಸ್
ಎಸ್ಟ್ರಾಡಿಯೋಲ್, LH ಮತ್ತು ಪ್ರೊಜೆಸ್ಟಿರಾನ್ ಟೆಸ್ಟ್‌ಗಳು
- 03
ಔಷಧಗಳು
IVF ಚಿಕಿತ್ಸೆಗೆ ಬೇಕಾದ ಒವೆರಿಯನ್ ಸ್ಟಿಮ್ಯುಲೇಷನ್ ಇಂಜೆಕ್ಷನ್ಸ್
- 04
ಸೆಮೆನ್ ಫ್ರೀಜಿಂಗ್
ಚಿಕಿತ್ಸೆಗಾಗಿ ಸೆಮೆನ್ ಸ್ಯಾಂಪಲ್ ಫ್ರೀಜಿಂಗ್
- 05
OPU
ಒವಮ್ ಪಿಕಪ್ (ಅಂಡಾಶಯದಿಂದ ಅಂಡಾಣುಗಳ ಸಂಗ್ರಹ)
- 06
ಭ್ರೂಣಶಾಸ್ತ್ರ
ICSI ಮತ್ತು ಬ್ಲಾಸ್ಟೋಸಿಸ್ಟ್ ಕಲ್ಚರ್
- 07
ಎಂಬ್ರಿಯೋ ಫ್ರೀಜಿಂಗ್
ಒಂದು ತಿಂಗಳ ಕಾಲ ಎಂಬ್ರಿಯೋ ಫ್ರೀಜಿಂಗ್
- 08
ಭ್ರೂಣ ವರ್ಗಾವಣೆ
ಹೊಸ ಅಥವಾ ಶೀತಲೀಕರಿಸಿದ ಭ್ರೂಣ ವರ್ಗಾವಣೆ
- 09
OT ಪರಿಕರಗಳು
ಅಂಡಾಣು ಸಂಗ್ರಹಣೆ ಮತ್ತು ಭ್ರೂಣ ವರ್ಗಾವಣೆ
- 10
ಪ್ರಗ್ನೆನ್ಸಿ ಟೆಸ್ಟ್
ಭ್ರೂಣ ವರ್ಗಾವಣೆಯ ನಂತರ ಪ್ರಗ್ನೆನ್ಸಿ ಟೆಸ್ಟ್
ಸರಿಯಾದ ಮಾಹಿತಿ ತಿಳಿದುಕೊಳ್ಳಲು ಮುಂದಿನ ಹೆಜ್ಜೆ ಇಡಿ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗರ್ಭಗುಡಿ ಶಾಖೆಗೆ ಭೇಟಿ ನೀಡಿ
ಪರಿಪೂರ್ಣತೆಯ ಸಂತಸ
ಕಳೆದ 15 ವರ್ಷಗಳಿಂದ ಗರ್ಭಗುಡಿ IVF ಸೆಂಟರ್ ದಂಪತಿಗಳ ಪೋಷಕರಾಗುವ ಕನಸಿಗೆ ಜೊತೆಯಾಗುತ್ತಿದೆ. ಬೆಂಗಳೂರು, ದಾವಣಗೆರೆ ಮತ್ತು ಹೊಸೂರು ಸೇರಿದಂತೆ ಒಟ್ಟು ಹತ್ತು ಶಾಖೆಗಳಿದ್ದು, ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ, ಸಂತಾನೋತ್ಪತ್ತಿ ತಜ್ಞರನ್ನು ಭೇಟಿ ಮಾಡಬಹುದು, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು ಹಾಗೆ ಸೂಕ್ತ ಮಾರ್ಗದರ್ಶನ ಪಡೆಯಬಹುದು.
ದಂಪತಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು
ಇನ್ನೂ ಗೊಂದಲವಿದೆಯೆ? ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9108 9108 32
ಗರ್ಭಧರಿಸಲು ತೊಂದರೆ ಇರುವ ಪ್ರತಿಯೊಬ್ಬರಿಗೂ IVF ಚಿಕಿತ್ಸೆಯ ಅಗತ್ಯವಿದೆಯೇ?
ಪರಿಪೂರ್ಣ 2026 ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳುವುದು ಹೇಗೆ?
ಪರಿಪೂರ್ಣ 2026 ಕಾರ್ಯಕ್ರಮಕ್ಕೆ ಯಾರು ಅರ್ಹರು?
ನೋಂದಾಯಿಸಿಕೊಳ್ಳುವ ಎಲ್ಲರಿಗೂ ಪರಿಪೂರ್ಣ 2026 ಸೌಲಭ್ಯ ಸಿಗುತ್ತದೆಯೇ?
ಪರಿಪೂರ್ಣ 2026 ಕಾರ್ಯಕ್ರಮದಲ್ಲಿ ಔಷಧಗಳೂ ಸೇರಿವೆಯೇ?
ನಾನು ಅರ್ಹವಾಗಿದ್ದರೆ, ಟ್ರೀಟ್ಮೆಂಟ್ ಪ್ಲಾನ್ ಸಿಗುತ್ತದೆಯೇ?
ಪರಿಪೂರ್ಣ 2026 ಕಾರ್ಯಕ್ರಮ ಪಡೆಯದಿದ್ದರೂ ನನ್ನ ಚಿಕಿತ್ಸೆಯನ್ನು ಮುಂದುವರಿಸಬಹುದೆ?
ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಪರಿಪೂರ್ಣ 2026ಕ್ಕೆ ಅರ್ಜಿ ಸಲ್ಲಿಸಬಹುದೆ?
ಶಾಖೆಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲೇ ರಿಜಿಸ್ಟರ್ ಮಾಡಿಕೊಳ್ಳಬಹುದೆ?
ಯಾವ ದಿನಾಂಕದವರೆಗೆ ಪರಿಪೂರ್ಣ 2026 ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು?
ನಿಯಮಗಳು ಮತ್ತು ಷರತ್ತುಗಳು
ಗರ್ಭಜ್ಞಾನ್ ಫೌಂಡೇಷನ್ ದಂಪತಿಗಳಿಗೆ ಮತ್ತು ಮಹಿಳೆಯರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ನೆರವಾಗುತ್ತಿದೆ. ತಾಯ್ತನದ ಸಂತೋಷ ಪಡೆದು ಸುಂದರ ಕುಟುಂಬದ ಅನುಭವ ಪಡೆಯಲು ಸಹಾಯ ಮಾಡುವುದೇ ಗರ್ಭಗುಡಿಯ ಉದ್ದೇಶ.
ಗರ್ಭಜ್ಞಾನ್ ಫೌಂಡೇಷನ್ ತನ್ನ CSR ಚಟುವಟಿಕೆಯ ಭಾಗವಾಗಿ, ಗರ್ಭಗುಡಿ IVF ಕೇಂದ್ರದಲ್ಲಿ IVF ಚಿಕಿತ್ಸೆಯ ವೆಚ್ಚದ ಒಂದು ಭಾಗವನ್ನು ಭರಿಸುವ ಮೂಲಕ ಪರಿಪೂರ್ಣ 2026 ಕಾರ್ಯಕ್ರಮಕ್ಕೆ ನೆರವು ನೀಡುತ್ತಿದೆ.
- ದಂಪತಿಗಳು ಭಾರತೀಯ ನಾಗರಿಕರಾಗಿರಬೇಕು ಮತ್ತು ಭಾರತದಲ್ಲಿಯೇ ವಾಸಿಸುತ್ತಿರಬೇಕು.
- ಗರ್ಭಗುಡಿ IVF ಕೇಂದ್ರದ ಇತರೆ ಯಾವುದೇ ಕಾರ್ಯಕ್ರಮಗಳ ಜೊತೆಗೆ ಪರಿಪೂರ್ಣ 2026 ಕಾರ್ಯಕ್ರಮವನ್ನು ಪಡೆಯಲು ಸಾಧ್ಯವಿಲ್ಲ.
- ಪರಿಪೂರ್ಣ 2026 ಕಾರ್ಯಕ್ರಮವನ್ನು ಇತರರಿಗೆ ವರ್ಗಾಯಿಸಲು ಸಾಧ್ಯವಿಲ್ಲ.
- ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಕೋಡ್ ಅಗತ್ಯವಿಲ್ಲ.
- ಫಲವತ್ತತೆ ತಜ್ಞರ ಸಮಾಲೋಚನೆ ಮತ್ತು ಪರೀಕ್ಷೆಯ ನಂತರವೇ ಅರ್ಹತೆ ಮತ್ತು ಚಿಕಿತ್ಸೆಯ ಯೋಜನೆಯನ್ನು ನಿರ್ಧರಿಸಲಾಗುತ್ತದೆ. ಚಿಕಿತ್ಸೆಯ ಫಲಿತಾಂಶ ದಂಪತಿಯಿಂದ ದಂಪತಿಗೆ ಬದಲಾಗಬಹುದು ಮತ್ತು ಯಾವುದೇ ನಿರ್ದಿಷ್ಟ ಫಲಿತಾಂಶದ ಗ್ಯಾರಂಟಿ ಇರುವುದಿಲ್ಲ.
- ಗರ್ಭಗುಡಿ IVF ಕೇಂದ್ರ ಮತ್ತು ಗರ್ಭಜ್ಞಾನ್ ಫೌಂಡೇಷನ್ ಯಾವುದೇ ಮುನ್ಸೂಚನೆ ಇಲ್ಲದೆ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.
- ಇದಲ್ಲದೆ, ಇತರೆ ನಿಯಮಗಳು ಮತ್ತು ಷರತ್ತುಗಳೂ ಅನ್ವಯವಾಗಬಹುದು.